ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಾವುದೇ ಹೆದರಿಕೆಯಿಲ್ಲದೆ ಎಗ್ಗಿಲ್ಲದೆ ಸಾಗುತ್ತಿದೆ. ಬೆಳಗಿನ ಜಾವ 6 ಗಂಟೆಯಿಂದ ಆರಂಭವಾಗಿ ತಡರಾತ್ರಿಯವರೆಗೂ ಸಣ್ಣಪುಟ್ಟ ಕಿರಾಣಿ ಅಂಗಡಿಗಳು, ಮಿಲಿಟರಿ ಹೋಟೆಲ್‌ಗಳು ಹಾಗೂ ಡಾಬಾಗಳಲ್ಲಿ ರಾಜಾರೋಷವಾಗಿ ಮದ್ಯ ಸರಬರಾಜಾಗುತ್ತಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರ ಜೀವನದೊಂದಿಗೆ ಆಟವಾಡಲಾಗುತ್ತಿದೆ. ಅಬಕಾರಿ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಕಣ್ಣೆದುರೇ ಈ ಅಕ್ರಮ ದಂಧೆ ನಡೆಯುತ್ತಿದ್ದರೂ, ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ….
ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ, ನೋಡಲು ಆಕರ್ಷಕವಾಗಿರುವ ‘ಬಜ್ ಬಾಲ್’ (BuzzBallz) ಎಂಬ ಮದ್ಯದ ಬಾಟಲಿಗಳು ಈಗ ಹೊಸ ಆತಂಕಕ್ಕೆ ಕಾರಣವಾಗಿವೆ. ಕಣ್ಣು ಸೆಳೆಯುವ ಬಣ್ಣ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪಾನೀಯವು ಯುವಕ-ಯುವತಿಯರನ್ನು ಮದ್ಯವ್ಯಸನದತ್ತ ತಳ್ಳುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೋಡಲು ಟೆನ್ನಿಸ್ ಬಾಲ್ ಅಥವಾ ಸಣ್ಣ ಪ್ಲಾಸ್ಟಿಕ್ ಬಾಲ್‌ನಂತೆ ಕಾಣುವ ಈ ಡ್ರಿಂಕ್, ಮೇಲ್ನೋಟಕ್ಕೆ ಹಣ್ಣಿನ ರಸ ಅಥವಾ ಎನರ್ಜಿ…