ಕಾನೂನು ಕಿಸೆಗೆ ಹಾಕಿಕೊಂಡ ಬಾರ್ ಮಾಲೀಕರು: ಬಾಗೇಪಲ್ಲಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಣುಮುಚ್ಚಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಅಬಕಾರಿ ಇಲಾಖೆಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ,ಬಾರ್ ಅಂಡ್ ರೆಸ್ಟೋರೆಂಟ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ,ಎಂದರೆ ಬೆಳಗಿನ ಜಾವ 5 ಗಂಟೆಗೇ ಬಾರ್‌ಗಳ ಬಾಗಿಲು ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪಟ್ಟಣದಲ್ಲಿ ಬಾರ್ ಮಾಲೀಕರದ್ದೇ ದರ್ಬಾರ್ ನಡೆದಂತಿದೆ. ಪಟ್ಟಣದ ಪ್ರಮುಖ ಬಾರ್‌ಗಳಲ್ಲಿ ನಿಯಮಗಳನ್ನು ಸಂಪೂರ್ಣವಾಗಿ…
ರಾಯಚೂರು: ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿ ಮಾರಾಟ ದಂಧೆಯನ್ನು ಬಯಲಿಗೆಳೆಯುವಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಕ್ರಮ ಅಡ್ಡೆಯ ಮೇಲೆ ಭರ್ಜರಿ ದಾಳಿ ನಡೆಸಿರುವ ಪೊಲೀಸರು ಭಾರಿ ಪ್ರಮಾಣದ ವಿಷಕಾರಿ ಸೇಂದಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಪರಶುರಾಮ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದ ಹೊರವಲಯದ ಸ್ನೇಹಾರೆಡ್ಡಿ ಡಾಬಾದ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಮಾರಕವಾಗಬಲ್ಲ ರಾಸಾಯನಿಕಗಳನ್ನು…