ಕಾನೂನು ಕಿಸೆಗೆ ಹಾಕಿಕೊಂಡ ಬಾರ್ ಮಾಲೀಕರು: ಬಾಗೇಪಲ್ಲಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಣುಮುಚ್ಚಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಅಬಕಾರಿ ಇಲಾಖೆಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ,ಬಾರ್ ಅಂಡ್ ರೆಸ್ಟೋರೆಂಟ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ,ಎಂದರೆ ಬೆಳಗಿನ ಜಾವ 5 ಗಂಟೆಗೇ ಬಾರ್‌ಗಳ ಬಾಗಿಲು ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪಟ್ಟಣದಲ್ಲಿ ಬಾರ್ ಮಾಲೀಕರದ್ದೇ ದರ್ಬಾರ್ ನಡೆದಂತಿದೆ. ಪಟ್ಟಣದ ಪ್ರಮುಖ ಬಾರ್‌ಗಳಲ್ಲಿ ನಿಯಮಗಳನ್ನು ಸಂಪೂರ್ಣವಾಗಿ…