ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ, ನೋಡಲು ಆಕರ್ಷಕವಾಗಿರುವ ‘ಬಜ್ ಬಾಲ್’ (BuzzBallz) ಎಂಬ ಮದ್ಯದ ಬಾಟಲಿಗಳು ಈಗ ಹೊಸ ಆತಂಕಕ್ಕೆ ಕಾರಣವಾಗಿವೆ. ಕಣ್ಣು ಸೆಳೆಯುವ ಬಣ್ಣ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪಾನೀಯವು ಯುವಕ-ಯುವತಿಯರನ್ನು ಮದ್ಯವ್ಯಸನದತ್ತ ತಳ್ಳುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೋಡಲು ಟೆನ್ನಿಸ್ ಬಾಲ್ ಅಥವಾ ಸಣ್ಣ ಪ್ಲಾಸ್ಟಿಕ್ ಬಾಲ್‌ನಂತೆ ಕಾಣುವ ಈ ಡ್ರಿಂಕ್, ಮೇಲ್ನೋಟಕ್ಕೆ ಹಣ್ಣಿನ ರಸ ಅಥವಾ ಎನರ್ಜಿ…
ಕನಕಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟವು ಹೆಮ್ಮರವಾಗಿ ಬೆಳೆದಿದ್ದು, ಬಡ ಕೂಲಿಕಾರ್ಮಿಕರ ಜೀವನ ದುಸ್ತರವಾಗಿದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಈ ವ್ಯವಹಾರದಿಂದಾಗಿ ಜನಸಾಮಾನ್ಯರ ದುಡಿಮೆಯ ಬಹುಪಾಲು ಹಣ ಮದ್ಯದ ಪಾಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಇಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಎನ್ನದೆ, ಹಗಲೆನ್ನದೆ ಎಲ್ಲ ಸಮಯದಲ್ಲೂ ಮದ್ಯ ಲಭ್ಯವಿರುವುದರಿಂದ ಕುಡಿತದ ಚಟಕ್ಕೆ ಬೀಳುವವರ ಸಂಖ್ಯೆ ಹೆಚ್ಚುತ್ತಿದೆ. ಬೆಳಿಗ್ಗೆ ಕಷ್ಟಪಟ್ಟು ದುಡಿದ ಹಣ ಸಂಜೆಯಾಗುವಷ್ಟರಲ್ಲಿ ಈ…